ಅಂದು 1989 ರಲ್ಲಿ ‘ಯುಗ ಪುರುಷ’ ಡಿ ರಾಜೇಂದ್ರ ಬಾಬು ಅವರ ನಿರ್ದೇಶನದ ಚಿತ್ರ, ವಿ ರವಿಚಂದ್ರನ್ ಹಾಗೂ ಖುಶ್ಬೂ ಅಭಿನಯದ ಚಿತ್ರ. ಇಂದು 2014 ರಂದು ‘ಯುಗ ಪುರುಷ’ ಚಿತ್ರ ಮಂಜು ಮಸ್ಕಲ್ ಮಟ್ಟಿ ನಿರ್ದೇಶನದಲ್ಲಿ ಯುವಕ ಅರ್ಜುನ್ ದೇವ್ ನಾಯಕ, ಪೂಜಾ ಝವೇರಿ ಅವರು ನಾಯಕಿ. ಈಗಾಗಲೇ 50ರಷ್ಟು ಚಿತ್ರೀಕರಣ ಬೆಂಗಳೂರಿನಲ್ಲಿ ಮಾಡಲಾಗಿದ
ಡಾಕ್ಟರ್ ಮಂಜುನಾಥ್ ಬಾಬು, ಚಳ್ಳಕೆರೆ ಅವರು ಬೆಟ್ಟ ಸ್ವಾಮಿ ಗೌಡ, ಶಿವರಾಜ್ ಟಿ ಸಿ ಅವರ ಜೊತೆ ಸೇರಿ ‘ಯುಗ ಪುರುಷ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಪಕ್ಕ ಕಮರ್ಷಿಯಲ್ ಚಿತ್ರದ ಜೊತೆಗೆ ಒಂದು ಪ್ರೇಮಕಥೆ ಸಹ ಇದೆ ಎಂದು ಬಣ್ಣಿಸುತ್ತಾರೆ ಮಂಜು ಅವರು. ಚಿತ್ರಕ್ಕೆ ಅವರದೇ ಕಥೆ, ಚಿತ್ರಕಥೆ, ನಟ ಬರಹಗಾರ ನವೀನ್ ಕೃಷ್ಣ ಅವರ ಸಂಭಾಷಣೆ ಇದೆ. ದನಪಾಲ್ ಸಿಂಗ್ ರಜಪುಟ್ ಅವರ ಸಂಗೀತ ಇದೆ. 21ನೇ ವರ್ಷಕ್ಕೆ ಶರತ್ ಕುಮಾರ್ ಜಿ ಅವರು ಅವರು ಕಿರಿಯ ಛಾಯಗ್ರಾಹಕರಾಗಿ ಪರಿಚಯ ಆಗುತ್ತಿದ್ದಾರೆ.
ವಿನೋದ್ ಮನೋಹರ್ ಅವರು ಸಂಕಲನಕಾರರು, ಡೈನಮಿಕ್ ಸ್ಟಾರ್ ದೇವರಾಜ್ ಅವರಿಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರ. ಮೂರು ವರ್ಷಗಳ ಬಳಿಕ ಅವರು ಅಭಿನಯಕ್ಕೆ ಒಪ್ಪಿದ್ದಾರೆ. ಶೋಬರಾಜ್, ಪವನ್, ಮೋಹನ್ ಜುನೇಜ, ಪಲ್ಲಕ್ಕಿ ರಾಧಾಕೃಷ್ಣ ಹಾಗೂ ಇತರರು ಪಾತ್ರವರ್ಗದಲ್ಲಿ ಇದ್ದಾರೆ.